ಊರ ನಡುವೆ ಒಂದು ಬೇಂಟೆ ಬಿದ್ದಿತ್ತು.

Category: ವಚನಗಳು

Author: ಅಕ್ಕಮಹಾದೇವಿ

ಊರ ನಡುವೆ ಒಂದು ಬೇಂಟೆ ಬಿದ್ದಿತ್ತು.
ಆರು ಕಂಡವರು ತೋರಿರಯ್ಯಾ.
ಊರಿಗೆ ದೂರುವೆನಗುಸೆಯನಿಕ್ಕುವೆ
ಅರಸುವೆನೆನ್ನ ಬೇಂಟೆಯ.
ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು.
ಅರಸಿಕೊಡಾ, ಚೆನ್ನಮಲ್ಲಿಕಾರ್ಜುನಾ.