ಬೆಲ್ಲದ ಕಟ್ಟೆಯ ಕಟ್ಟಿ
Category: ಶ್ರೀಕೃಷ್ಣ
Author: ಪುರಂದರದಾಸ
ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೊಗುವುದೇನಯ್ಯಾ ||
ಏನು ನೋಡಿದರೇನು
ಏನು ಕೇಳಿದರೇನು |
ಮನದೊಳಗಿನ ತಾಮಸ ಮಾಣದನ್ನಕ ||
ಕೊಳಲ ದನಿಗೆ ಸರ್ಪ
ತಲೆದೂಗುವಂದದಿ
ಇದಕೇನು ಮದ್ದು
ಶ್ರೀಪುರಂದರ ವಿಟ್ಠಲಾ ||