ಎನ್ನ ಪ್ರಾಣ ಜಂಗಮ,

Category: ವಚನಗಳು

Author: ಅಕ್ಕಮಹಾದೇವಿ

ಎನ್ನ ಪ್ರಾಣ ಜಂಗಮ,
ಎನ್ನ ಜೀವ ಜಂಗಮ,
ಎನ್ನ ಪುಣ್ಯದ ಫಲವು ಜಂಗಮ
ಎನ್ನ ಹ[ರು]ರುಷದ ಮೇರೆ [ಜಂಗಮ]
ಚೆನ್ನಮಲ್ಲಿಕಾರ್ಜುನಾ, ಜಂಗಮ ತಿಂಥಿಣಿಯಲೋಲಾಡುವೆ.