ಎನ್ನನಿರಿದಡೆ ಸೈರಿಸುವೆ, ಎನ್ನ ಕೊರೆದಡೆ ಸೈರಿಸುವೆ,
Category: ವಚನಗಳು
Author: ಅಕ್ಕಮಹಾದೇವಿ
ಎನ್ನನಿರಿದಡೆ ಸೈರಿಸುವೆ, ಎನ್ನ ಕೊರೆದಡೆ ಸೈರಿಸುವೆ,
ಎನ್ನ ಕಡಿದು ಹರಹಿದಡೆ ಮನಕ್ಕೆ ತಾರೆನು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರನೊಡನೆನ್ನ ಕಣ್ಣ ಮುಂದೆ ಕಂಡು ಮೊಗೆದುಂಡಮೃತದಂತೆ ಆದೆನಯ್ಯಾ.