ಎಲೆ ತಾಯಿ ನೀನಂತಿರು,

Category: ವಚನಗಳು

Author: ಅಕ್ಕಮಹಾದೇವಿ

ಎಲೆ ತಾಯಿ ನೀನಂತಿರು,
ಎಲೆ ತಂದೆ ನೀನಂತಿರು,
ಎಲೆ ಬಂಧುವೆ ನೀನಂತಿರು,
ಎಲೆ ಕುಲವೆ ನೀನಂತಿರು,
ಎಲೆ ಬಲವೆ ನೀನಂತಿರು.
ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ
ಹೋಗುತ್ತಿದ್ದೇನೆ. ನಿಮಗೆ ಶರಣಾರ್ಥಿ ಶರಣಾರ್ಥಿ