ಎಳೆವರದಲ್ಲಿ ಮೋಹಮೊಳೆ ಹುಟ್ಟಿತ್ತು,

Category: ವಚನಗಳು

Author: ಅಕ್ಕಮಹಾದೇವಿ

ಎಳೆವರದಲ್ಲಿ ಮೋಹಮೊಳೆ ಹುಟ್ಟಿತ್ತು,
ಗುರುಹಸ್ತದಲ್ಲಿ ಅಂಕುರವಾಯಿತ್ತು,
ಏಳೆಲೆ ಹೋಯಿತ್ತು ಬಳಗದ ನಡುವೆ.
ಕೇಳೆಲೆಯವ್ವಾ, ನೀನು ಕೇಳು ತಾಯೆ.
ಒಂಬತ್ತೆಲೆ ಎಂದಿಂಗೆ ಪರಿಪೂರ್ಣವಾಯಿತ್ತು ನೋಡವ್ವಾ.
ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ
ಲೋಕದವರ ಸಂಬಂಧವಿಲ್ಲೆಂದು ಬಿಟ್ಟು ತೊಲಗಿದೆನು ಕಾಣಾ ಎಲೆಯವ್ವಾ.