ಒಂದರಳ ಶಿವಂಗೆಂದ ಫಲದಿಂದ

Category: ವಚನಗಳು

Author: ಅಕ್ಕಮಹಾದೇವಿ

ಒಂದರಳ ಶಿವಂಗೆಂದ ಫಲದಿಂದ
ಶಿವಪದಂಗಳಾದುದ ಕೇಳಿಯರಿಯಾ ?
ಒಂದರಳನೇರಿಸುವಲ್ಲಿ ಅಡ್ಡವಿಸಿದರೆ
ಗೊಂದಣದ ಕುಲಕೋಟಿಗೆ ನರಕ ಕಾಣಾ.
ಇಂದು ಚೆನ್ನಮಲ್ಲಿಕಾರ್ಜುನನ ವೇಳೆ ತಡೆದಡೆ ಮುಂದೆ ಬಹ ನರಕಕ್ಕೆ ಕಡೆಯಿಲ್ಲ ಮರುಳೆ.