ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
Category: ವಚನಗಳು
Author: ಅಕ್ಕಮಹಾದೇವಿ
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಬತ್ತುನಾಲ್ಕುಲಕ್ಷಯೋನಿಯೊಳಗೆ ಬಾರದ ಭವಂಗಳಲ್ಲಿ ಬಂದೆ ಬಂದೆ.
ಉಂಡೆ ಉಂಡೆ ಸುಖಾಸುಖಂಗಳ.
ಹಿಂದಣ ಜನ್ಮ ತಾನೇನಾದಡೆಯೂ ಆಗಲಿ ಮುಂದೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.
Author: ಅಕ್ಕಮಹಾದೇವಿ
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಬತ್ತುನಾಲ್ಕುಲಕ್ಷಯೋನಿಯೊಳಗೆ ಬಾರದ ಭವಂಗಳಲ್ಲಿ ಬಂದೆ ಬಂದೆ.
ಉಂಡೆ ಉಂಡೆ ಸುಖಾಸುಖಂಗಳ.
ಹಿಂದಣ ಜನ್ಮ ತಾನೇನಾದಡೆಯೂ ಆಗಲಿ ಮುಂದೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.