ಕಂಗಳ ಕಳೆದು ಕರುಳ ಕಿತ್ತು ಕಾಮನ ಮೂಗ ಕೊಯ್ದು
Category: ವಚನಗಳು
Author: ಅಕ್ಕಮಹಾದೇವಿ
ಕಂಗಳ ಕಳೆದು ಕರುಳ ಕಿತ್ತು ಕಾಮನ ಮೂಗ ಕೊಯ್ದು
ಭಂಗದ ಬಟ್ಟೆಯ ಭವ ಗೆಲಿದವಳಿಗಂಗವೆಲ್ಲಿಯದು ಹೇಳಾ ?
ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದಡೇನುಂಟು ?
ಅಂಗವೆ ಲಿಂಗವಹ ಪರಿಯನೆನಗೆ ಹೇಳಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ ?