ಕೂಡಿ ಕೂಡುವ ಸುಖದಿಂದ

Category: ವಚನಗಳು

Author: ಅಕ್ಕಮಹಾದೇವಿ

ಕೂಡಿ ಕೂಡುವ ಸುಖದಿಂದ
ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು, ಕೆಳದಿ ?
ಒಚ್ಚೊತ್ತಗಲಿದಡೆ ಕಾಣದಿರಲಾರೆ.
ಎನ್ನ ದೇವ ಚೆನ್ನಮಲ್ಲಿಕಾರ್ಜುನನಗಲಿಯಗಲದ ಸುಖವೆಂದಪ್ಪುದೊ ?