ಕಾಯದ ಕಳವಳವ ಕೆಡಿಸಿ, ಮನದ ಮಾಯೆಯ ಮಾಣಿಸಿ,
Category: ವಚನಗಳು
Author: ಅಕ್ಕಮಹಾದೇವಿ
ಕಾಯದ ಕಳವಳವ ಕೆಡಿಸಿ, ಮನದ ಮಾಯೆಯ ಮಾಣಿಸಿ,
ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯಾ.
ಶಿವಶಿವಾ, ಎನ್ನ ಭವಬಂಧನವ ಬಿಡಿಸಿ,
ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯಾ.
ಇರುಳೋಸರಿಸಿದ ಜಕ್ಕವಕ್ಕಿಯಂತೆ
ನಾನಿಂದು ನಿಮ್ಮ ಶ್ರೀಪಾದವನಿಂಬುಗೊಂಡು ಸುಖದೊಳೋಲಾಡುವೆನಯ್ಯಾ, ಚೆನ್ನಮಲ್ಲಿಕಾರ್ಜುನಾ.