ಕೆತ್ತಿದ ತಿಗುಡು ಹತ್ತೂದೆ ಮುನ್ನಿನಂತೆ ?
Category: ವಚನಗಳು
Author: ಅಕ್ಕಮಹಾದೇವಿ
ಕೆತ್ತಿದ ತಿಗುಡು ಹತ್ತೂದೆ ಮುನ್ನಿನಂತೆ ?
ಎರಿಣ ತಪ್ಪಿದಲ್ಲಿ ಗುಣವನರಸುವರೆ ?
ಸಕ್ಕರೆ ಹಾಲು ತುಪ್ಪ ಎಂದರೆ
ಕಪ್ಪ ಕಂಡಲ್ಲಿ ಮನ ಹಿಡಿವುದೆ ?
ಕರ್ತೃವೆ ಚೆನ್ನಮಲ್ಲಿಕಾರ್ಜುನಯ್ಯಾ ಸತ್ತವರು ಮರಳಿ ತಕ್ಕೈಸಿಕೊಂಬರೆ