ಗುರುವೆಂಬ ತೆತ್ತಿಗನು

Category: ವಚನಗಳು

Author: ಅಕ್ಕಮಹಾದೇವಿ

ಗುರುವೆಂಬ ತೆತ್ತಿಗನು
ಲಿಂಗವೆಂಬಲಗನು ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು,
ಕಾದಿದೆ ಗೆಲಿದೆ ಕಾಮನೆಂಬವನ,
ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು.
ಅಲಗು ಎನ್ನೊಳು ನಟ್ಟು ಆನಳಿದ ಕಾರಣ ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ.