ಗಿರಿಯೊಳು ಮನದೊಳು ಗಿಡಗಿಡದತ್ತ
Category: ವಚನಗಳು
Author: ಅಕ್ಕಮಹಾದೇವಿ
ಗಿರಿಯೊಳು ಮನದೊಳು ಗಿಡಗಿಡದತ್ತ
ದೇವ, ಎನ್ನದೇವ, ಬಾರಯ್ಯಾ,
ತೋರಯ್ಯಾ ನಿಮ್ಮ ಕರುಣವನೆಂದು,
ನಾನು ಅರಸುತ್ತ ಅಳಲುತ್ತ ಕಾಣದೆ
ಸುಯಿದು ಬಂದು ಕಂಡೆ.
ಶರಣರ ಸಂಗದಿಂದ ಅರಸಿ ಹಿಡಿದಿಹೆನಿಂದು
ನೀನಡಗುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಾ.