ತನುವಿಕಾರದಿಂದ ಸವದು ಸವದು,
Category: ವಚನಗಳು
Author: ಅಕ್ಕಮಹಾದೇವಿ
ತನುವಿಕಾರದಿಂದ ಸವದು ಸವದು,
ಮನವಿಕಾರದಿಂದ ನೊಂದು ಬೆಂದವರೆಲ್ಲಾ ಬೋಳಾಗಿ ;
ದಿನ ಜವ್ವನಂಗಳು ಸವದು ಸವದು,
ಜಂತ್ರ ಮುರಿದು ಗತಿಗೆಟ್ಟವರೆಲ್ಲಾ ಬೋಳಾಗಿದ
'ಹೇಸಿ, ಒಲ್ಲೆ ಸಂಸಾರವನೆಂಬರು '
ವೈರಾಗ್ಯವ ಬಲ್ಲವರಲ್ಲ ಕೇಳವ್ವಾ.
ಕನ್ನೆಯಳಿಯದ ಜವ್ವನ ಸತಿಗಲ್ಲದೆ ಚೆನ್ನಮಲ್ಲಿಕಾರ್ಜುನದೇವಗಲ್ಲ ಕೇಳವ್ವಾ.