ತನುವಿಡಿದ ಇಂದ್ರಿಯಸುಖ

Category: ವಚನಗಳು

Author: ಅಕ್ಕಮಹಾದೇವಿ

ತನುವಿಡಿದ ಇಂದ್ರಿಯಸುಖ
ಸಿರಿಯಂತೆ ತೋರಿ ಅಡಗುತ್ತಲಿದೆ.
ಗಗನದೊಡ್ಡಣೆಯಂತೆ ತನು ;
ನೋಡ ನೋಡಲನುಮಾನವಿಲ್ಲದೆ ಹರಿದು ಹೋಗುತ್ತದೆ.
ಇವಾದಿಯ ಮಾಣಿಸಿ, ನಿಮ್ಮ ಘನನೆನಹಿನೊಳಿರಿಸಾ ಚೆನ್ನಮಲ್ಲಿಕಾರ್ಜುನಯ್ಯಾ.