ತನುಶುದ್ಭ ಮನಶುದ್ಧ ಭಾವಶುದ್ಧ
Category: ವಚನಗಳು
Author: ಅಕ್ಕಮಹಾದೇವಿ
ತನುಶುದ್ಭ ಮನಶುದ್ಧ ಭಾವಶುದ್ಧ
ವಾದವರನೆನಗೊಮ್ಮೆ ತೋರಾ ?
ನಡೆಯೆಲ್ಲ ಸದಾಚಾರ; ನುಡಿಯೆಲ್ಲ ಶಿವಾಗಮ ;
ನಿತ್ಯಶುದ್ಧರಾದವರನೆನಗೊಮ್ಮೆ ತೋರಾ ?
ಕತ್ತಲೆಯ ಮೆಟ್ಟಿ ತಳವೆಳಗಾಗಿ
ಹೊರಗೊಳಗೊಂದಾಗಿ ನಿಂದ
ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ ?