ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ.
Category: ವಚನಗಳು
Author: ಅಕ್ಕಮಹಾದೇವಿ
ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ.
ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ
ಎನ್ನ ಆರತವೆಲ್ಲವೂ ಲಿಂಗಾ ನಿಮ್ಮಲ್ಲಿ ನಟ್ಟಿತು ನೋಡಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನು ಕರಸ್ಥಲದಲ್ಲಿ ನೋಡಿ ಕಂಗಳೆ ಪ್ರಾಣವಾಗಿರ್ದೆನಯ್ಯಾ.