ಮಣಿವೆ ನಿನ್ನ ಕಮಲದಡಿಗೆ
Category: ಶ್ರೀರಾಮಕೃಷ್ಣ
Author: ಸ್ವಾಮಿ ತದ್ರೂಪಾನಂದ
ಮಣಿವೆ ನಿನ್ನ ಕಮಲದಡಿಗೆ
ದಯದಿ ಬಾರೊ ಎದೆಯ ಗುಡಿಗೆ ||
ಭಕ್ತಹೃದಯಜಲಜ ಬಂಧು
ನೀನಪಾರ ಕರುಣೆ ಸಿಂಧು |
ಪ್ರೇಮಭಕ್ತಿಯೊಡನೆ ಕೂಡಿ
ಬಾರೈ ತಂದೆ ಕರೆವೆ ಬೇಡಿ ||
ತ್ಯಾಗಮೂರ್ತಿ ತಪೋಮೂರ್ತಿ
ಜ್ಞಾನಮೂರ್ತಿ ಸೊಗದ ಮೂರ್ತಿ |
ಹರಿದಿದೆಲ್ಲೆಡೆ ನಿನ್ನ ಕೀರ್ತಿ
ತ್ಯಾಗಪಥದ ನಿತ್ಯಸ್ಫೂರ್ತಿ ||
ವಿಶ್ವದೊಡೆಯ ಶುದ್ಧಹೃದಯ
ಕೋಟಿಸೂರ್ಯ ಜ್ಯೋತಿರೂಪ |
ನಿನ್ನೀ ಕಂದನ ಕರೆಯನಾಲಿಸಿ
ಬಾರೋ ಬೇಗ ಶಕ್ತಿವೆರಸಿ ||