ನಾಳದ ಮರೆಯ ನಾಚಿಕೆ,

Category: ವಚನಗಳು

Author: ಅಕ್ಕಮಹಾದೇವಿ

ನಾಳದ ಮರೆಯ ನಾಚಿಕೆ,
ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು.

ಮನ ಮೆಚ್ಚಿದಭಿಮಾನಕ್ಕೆ ಆವುದು ಮರೆ ಹೇಳಾ ?
ಕಾಯ ಮಣ್ಣೆಂದು ಕಳೆದ ಬಳಿಕ,
ದೇಹದಭಿಮಾನ ಅಲ್ಲಿಯೇ ಹೋಯಿತ್ತು.

ಪ್ರಾಣ ಬಯಲೆಂದು ಕಳೆದ ಬಳಿಕ,
ಮನದ ಲಜ್ಜೆಯಲ್ಲಿಯೆ ಹೋಯಿತ್ತು.

ಚೆನ್ನಮಲ್ಲಿಕಾರ್ಜುನನ ಕೂಡಿ ಲಜ್ಜೆಗೆಟ್ಟವಳ
ಉಡಿಗೆಯ ಸೆಳೆದುಕೊಂಡಡೆ, ಮುಚ್ಚಿದ
ಸೀರೆ ಹೋದರೆ ಅಂಜುವರೆ ಮರುಳೆ ?