ಮನವೆಂಬ ಮರ್ಕಟನು

Category: ಶ್ರೀಶಿವ

Author: ಷಣ್ಮುಖಸ್ವಾಮಿ

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ
ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ

ವಿಷಯಂಗಳೆಂಬ ಫಲಂಗಳ ಗ್ರಹಿಸಿ
ಭವದತ್ತ ಮುಖವಾಗಿ ಹೋಗುತಿದೆ ನೋಡಾ ||

(ಈ) ಮನವೆಂಬ ಮರ್ಕಟನ
(ನಿಮ್ಮ) ನೆನಹೆಂಬ ಪಾಶದಿ ಕಟ್ಟಿ
ಎನ್ನನುಳಿಸಿಕೊಳ್ಳಯ್ಯ ಅಖಂಡೇಶ್ವರಾ ||