ಪಂಚೇಂದ್ರಿಯದ ಉರವಣೆಯ

Category: ವಚನಗಳು

Author: ಅಕ್ಕಮಹಾದೇವಿ

ಪಂಚೇಂದ್ರಿಯದ ಉರವಣೆಯ
ಉದುಮದದ ಭರದ ಜವ್ವನದೊಡಲು ವೃಥಾ ಹೋಯಿತ್ತಲ್ಲಾ ?
ತುಂಬಿ ಪರಿಮಳವ ಕೊಂಡು ಲಂಬಿಸುವ ತೆರನಂತೆ ಇನ್ನೆಂದಿಂಗೆ ಒಳಕೊಂಬೆಯೊ, ಅಯ್ಯಾ
ಚೆನ್ನಮಲ್ಲಿಕಾರ್ಜುನಾ ? |