ಮರೆಯಬೇಡ ಮನವೆ
Category: ಶ್ರೀಕೃಷ್ಣ
Author: ಪುರಂದರದಾಸ
ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ ||
ಯಾಗಯಜ್ಞ ಮಾಡಲೇಕೆ
ಯೋಗಿಯತಿಯು ಆಗಲೇಕೆ |
ನಾಗಶಯನ ನಾರದನುತನ
ಕೂಗಿ ಭಜನ ಮಾಡೋ ||
ಸತಿಯು ಸುತರು ಹಿತರು ಎಂದು
ಮತಿಯುಗೆಟ್ಟು ಕೆಡಲಿಬೇಡ |
ಗತಿಯು ತಪ್ಪಿ ಹೋಗುವಾಗ
ಸತಿಯು ಸುತರು ಬರುವರೇ ||
ಹರಿಯ ಸ್ಮರಣೆ ಮಾತ್ರದಿಂದ
ಘೋರದುರಿತವೆಲ್ಲ ನಾಶ |
ಪರಮಪುರುಷ ಶ್ರೀ ಪುರಂದರ
ವಿಟ್ಠಲರಾಯ ಪದವಿ ಕೊಡುವ ||