ಪುಣ್ಯಪಾಪಂಗಳನರಿಯದ ಮುನ್ನ,

Category: ವಚನಗಳು

Author: ಅಕ್ಕಮಹಾದೇವಿ

ಪುಣ್ಯಪಾಪಂಗಳನರಿಯದ ಮುನ್ನ,
ಅನೇಕ ಭವಂಗಳ ಬಂದೆನಯ್ಯಾ ?
ಬಂದು ಬಂದು ನೊಂದು ಬೆಂದೆನಯ್ಯಾ ?
ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ ?
ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ ನಿಮ್ಮ ಧರ್ಮ ನಿಮ್ಮ ಧರ್ಮ.
ನಿಮ್ಮಲೊಂದು ಬೇಡುವೆನು, ಎನ್ನ ಬಂಧನ ಬಿಡುವಂತೆ ಮಾಡಯ್ಯಾ ಚೆನ್ನಮಲ್ಲಿಕಾರ್ಜುನಾ