ಬಂದಹನೆಂದು ಬಟ್ಟೆಯ ನೋಡಿ,

Category: ವಚನಗಳು

Author: ಅಕ್ಕಮಹಾದೇವಿ

ಬಂದಹನೆಂದು ಬಟ್ಟೆಯ ನೋಡಿ,
ಬಾರದಿದ್ದಡೆ ಕರಗಿ ಕೊರಗಿದೆನವ್ವಾ.
ತಡವಾದಡೆ ಬಡವಾದೆ ತಾಯೆ.
ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ ತಕ್ಕೆಸಡಲಿದ ಜಕ್ಕವಕ್ಕಿಯಂತಾದೆನವ್ವಾ