ಮಂಗಲಮಯ ಪ್ರಭು
Category: ವೈರಾಗ್ಯ
Author: ಸ್ವಾಮಿ ಹರ್ಷಾನಂದ
ಮಂಗಲಮಯ ಪ್ರಭು ನೀನೆಂದರಿತಿಹೆ
ಕಂಗಳು ನಿನ್ನಯ ಪಾದದಿ ನೆಟ್ಟಿರೆ ||
ಇರಿಸೈ ಸುಖದಲಿ ಇರಿಸು ದುಃಖದಲಿ
ಅರಿತಿಹೆ ಭಯವಿನಿತಿಲ್ಲವು ಎನಗೆ ||
ಏನನು ಗೈದರು ಕೈಬಿಡೆಯೆಂಬುವ
ಎನಗೆ ನೀಡು ನೀ ಭರವಸೆಯ ||
ಪ್ರಭುವೇ ದೇವನೆ
ಬಾ ಮಮ ಹೃದಯಕೆ
ಶುಭವನು ಕೋರುತ
ಬೇಡುತಲಿರುವೆ ||