ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ,
Category: ವಚನಗಳು
Author: ಅಕ್ಕಮಹಾದೇವಿ
ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ,
ಆನೇವೆನಯ್ಯಾ ?
ಹಸಿದುಂಡಡೆ ಉಂಡು ಹಸಿವಾಯಿತ್ತು.
ಇಂದು ನೀನೊಲಿದೆಯಾಗಿ,
ಎನಗೆ ಅಮೃತದ ಆಪ್ಯಾಯನವಾಯಿತ್ತು.
ಇದು ಕಾರಣ, ನೀನಿಕ್ಕಿದ ಮಾಯೆಯನಿನ್ನು
ಮುಟ್ಟಿದೆನಾದಡೆ ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ.