ಭವಿಸಂಗವಳಿದು ಭಕ್ತನಾದ ಬಳಿಕ,

Category: ವಚನಗಳು

Author: ಅಕ್ಕಮಹಾದೇವಿ

ಭವಿಸಂಗವಳಿದು ಭಕ್ತನಾದ ಬಳಿಕ,
ಭಕ್ತಂಗೆ ಭವಿಸಂಗವತಿಘೋರ ನರಕ.
ಶರಣಸತಿ ಲಿಂಗಪತಿಯಾದ ಬಳಿಕ,
ಶರಣಂಗೆ ಸತಿಸಂಗವು ಅಘೋರನರಕ.
ಚೆನ್ನಮಲ್ಲಿಕಾರ್ಜುನಾ, ಪ್ರಾಣಗುಣವಳಿಯದವರ ಸಂಗವೇ ಭಂಗ.