ಬಾರದ ಭವಂಗಳಲ್ಲಿ ಬಂದೆನಯ್ಯಾ.
Category: ವಚನಗಳು
Author: ಅಕ್ಕಮಹಾದೇವಿ
ಬಾರದ ಭವಂಗಳಲ್ಲಿ ಬಂದೆನಯ್ಯಾ.
ಕಡೆಯಿಲ್ಲದ ತಾಪಂಗಳಲ್ಲಿ ನೊಂದು
ನಿಮ್ಮ ಕರುಣೆಗೆ ಬಳಿಸಂದೆನಯ್ಯಾ.
ಇದು ಕಾರಣ ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ
ತನುವನುವಾಗಿ ಮನಮಾರುವೋಗೆ ಮತ್ತಿಲ್ಲದ
ತವಕದ ಸ್ನೇಹಕ್ಕೆ ತೆರಹಿನ್ನೆಂತು ಹೇಳಾ ತಂದೆ ?||