ಮಡಿವಾಳಯ್ಯನ ಪ್ರಸಾದವ ಕೊಂಡು

Category: ವಚನಗಳು

Author: ಅಕ್ಕಮಹಾದೇವಿ

ಮಡಿವಾಳಯ್ಯನ ಪ್ರಸಾದವ ಕೊಂಡು
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.
ಸಿದ್ಧರಾಮಯ್ಯನ ಪ್ರಸಾದವ ಕೊಂಡು
ಎನ್ನ ಕರಣಂಗಳು ಶುದ್ಧವಾಯಿತ್ತಯ್ಯಾ.
ಬಸವಣ್ಣನ ಪ್ರಸಾದವ ಕೊಂಡು
ಭಕ್ತಿಸಂಪನ್ನನಾದೆನಯ್ಯಾ.
ಚೆನ್ನಬಸವಣ್ಣನ ಪ್ರಸಾದವ ಕೊಂಡು
e್ಞನಸಂಪನ್ನನಾದೆನಯ್ಯಾ.
ನಿಜಗುಣನ ಪ್ರಸಾದವ ಕೊಂಡು ನಿಶ್ಚಿಂತನಾದೆನಯ್ಯಾ.
ಅಜಗಣ್ಣನ ಪ್ರಸಾದವ ಕೊಂಡು ಆರೂಢನಾದೆನಯ್ಯಾ.
ಘಟ್ಟಿವಾಳಯ್ಯನ ಪ್ರಸಾದವ ಕೊಂಡು
ನಿರಾಕಾರ ಪರಬ್ರಹ್ಮ ಸ್ವರೂಪನಾದೆನಯ್ಯಾ.
ಪ್ರಭುದೇವರ ಪ್ರಸಾದವ ಕೊಂಡು ಚೆನ್ನಮಲ್ಲಿಕಾರ್ಜುನಯ್ಯನ ಕೂಡಿ ಸುಖಿಯಾದೆನು.