ಮನ ಬೀಸರವಾದಡೆ ಪ್ರಾಣ ಪಲ್ಲಟವಹುದವ್ವಾ.

Category: ವಚನಗಳು

Author: ಅಕ್ಕಮಹಾದೇವಿ

ಮನ ಬೀಸರವಾದಡೆ ಪ್ರಾಣ ಪಲ್ಲಟವಹುದವ್ವಾ.
ತನು ಕರಣಂಗಳು ಮೀಸಲಾಗಿ
ಮನ ಸಮರಸವಾಯಿತ್ತು ನೋಡಾ
ಅನ್ಯವನರಿಯೆ ಭಿನ್ನವನರಿಯೆ.
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಬಳಿಯವಳಾನು ಕೇಳಾ ತಾಯೆ ?