ಮೂರುತಿಯನೆ ನಿಲಿಸೋ
Category: ಶ್ರೀಕೃಷ್ಣ
Author: ಪುರಂದರದಾಸ
ಮೂರುತಿಯನೆ ನಿಲಿಸೋ ಮಾಧವ ನಿನ್ನ |
ಎಳೆ ತುಳಸಿಯ ವನಮಾಲೆಯು ಕೊರಳೊಳು
ಪೊಳೆವ ಪೀತಾಂಬರದಿಂದ ಒಪ್ಪುವ ನಿನ್ನ ||
ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀಲಕುಮಿಯು ಉರದಿ ಒಪ್ಪುವ ನಿನ್ನ ||
ಭಕ್ತರ ಕಲ್ಪತರು ಭಾಗ್ಯದ ಸುರಧೇನು
ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲ ||