ಮುಡಿಬಿಟ್ಟು ತೊಂಗವಾರಿದವು ಕೇಳು ತಂದೆ.

Category: ವಚನಗಳು

Author: ಅಕ್ಕಮಹಾದೇವಿ

ಮುಡಿಬಿಟ್ಟು ತೊಂಗವಾರಿದವು ಕೇಳು ತಂದೆ.
ಉಡಿ ಜೋಲಿ ಅಡಿಗಿಕ್ಕಿ ಹೋಯಿತ್ತು ಶಿವಶಿವಾ.
ನಡೆಗೆಟ್ಟು ನಿಧಿ ನಿಂದಿತ್ತು ಕೇಳಾ ಎನ್ನ ತಂದೆ.
ಪ್ರಾಣದೊಡೆಯಾ, ಕರುಣದಿಂದೊಪ್ಪುಗೊಳ್ಳಾ ಚೆನ್ನಮಲ್ಲಿಕಾರ್ಜುನಾ.