ವೃಷಭನ ಹಿಂದೆ ಪಶುವಾನು ಬಂದೆನು ;

Category: ವಚನಗಳು

Author: ಅಕ್ಕಮಹಾದೇವಿ

ವೃಷಭನ ಹಿಂದೆ ಪಶುವಾನು ಬಂದೆನು ;
ನಂಬಿ ನಚ್ಚಿ ಪಶುವಾನುಬಂದೆನು.
ಸಾಕಿ ಸಲಹಿಹನೆಂದು ಸಲೆ ನಚ್ಚಿ ಬಂದೆನು.
ಒಲಿದಹ ಒಲಿದಹನೆಂದು ಬಳಿಯಲ್ಲಿ ಬಂದೆನು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ನಂಬಿ ಬಂದ ಹೆಂಗೂಸ ಹಿಂದೊಬ್ಬರೆಳದೊಯ್ದರೆ
ಎಂತು ಸೈರಿಸಿದೆ ಹೇಳಾ, ಎನ್ನ ದೇವರದೇವಾ ?