ವಿರಕ್ತಿ ವಿರಕ್ತಿಯೆಂಬವರು
Category: ವಚನಗಳು
Author: ಅಕ್ಕಮಹಾದೇವಿ
ವಿರಕ್ತಿ ವಿರಕ್ತಿಯೆಂಬವರು
ವಿರಕ್ತಿಯ ಪರಿಯೆಂತುಟು ಹೇಳಿರಯ್ಯಾ ?
ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದು
ಬತ್ತಲೆಯಿರ್ದಡೆ ವಿರಕ್ತನೆ ?
ಉಟ್ಟುದ ತೊರದ ಮತ್ತೆ
ಕಟ್ಟಿದ ಲಿಂಗವ ಕೈಯಲ್ಲಿ ಹಿಡಿಯಲೇಬೇಕು.
ಉಟ್ಟುದ ತೊರೆಯದೆ
ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದ ಭ್ರಷ್ಟರನೇನೆಂಬೆ ಚೆನ್ನಮಲ್ಲಿಕಾರ್ಜುನಾ ?