ವಿಷಯದ ಸುಖ ವಿಷವೆಂದರಿಯದ ಮರುಳೆ,

Category: ವಚನಗಳು

Author: ಅಕ್ಕಮಹಾದೇವಿ

ವಿಷಯದ ಸುಖ ವಿಷವೆಂದರಿಯದ ಮರುಳೆ,
ವಿಷಯಕ್ಕೆ ಅಂಗವಿಸದಿರಾ.
ವಿಷಯದಿಂದ ಕೆಡನೆ ರಾವಣನು
ವಿಷಯದಿಂದ ಕೆಡನೆ ದೇವೇಂದ್ರನು ?
ವಿಷಯದಿಂದಾರು ಕೆಡರು ಮರುಳೆ ?
ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ.
ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ ನೀನಪ್ಪಿಹೆನೆಂದಡೆ ಒಣಗಿದ ಮರನಪ್ಪುವಂತೆ ಕಾಣಾ