ಶರಣರ ಮನ ನೋಯ ನುಡಿದೆನಾಗಿ,
Category: ವಚನಗಳು
Author: ಅಕ್ಕಮಹಾದೇವಿ
ಶರಣರ ಮನ ನೋಯ ನುಡಿದೆನಾಗಿ,
ಹರಜನ್ಮವಳಿದು ನರಜನ್ಮಕ್ಕೆ ಬಂದೆನು.
ಹರನಟ್ಟಿದ ಬೆಸನ ಶಿರದೊಳಗಾಂತೊಡೆ,
ಗಿರಿಗಳ ಭಾರವೆನಗಾದುದಯ್ಯ.
ಚೆನ್ನಮಲ್ಲಿಕಾರ್ಜುನನ ಧರ್ಮದಿಂದ
ಸಂಸಾರ ಕರ್ಮದ ಹೊರೆಯನಿಳುಹಿ, ನಡುದೊರೆಯ ಹಾಯಿದು ಹೋದೆನು