ಸುಖದ ಸುಖಿಗಳ ಸಂಭಾಷಣೆಯಿಂದ
Category: ವಚನಗಳು
Author: ಅಕ್ಕಮಹಾದೇವಿ
ಸುಖದ ಸುಖಿಗಳ ಸಂಭಾಷಣೆಯಿಂದ
ದುಃಖಕ್ಕೆ ವಿಶ್ರಾಮವಾಯಿತ್ತು.
ಭಾವಕ್ಕೆ ತಾರ್ಕಣೆಯಾದಲ್ಲಿ,
ನೆನಹಕ್ಕೆ ವಿಶಾಮವಾಯಿತ್ತು.
ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತಯ್ಯಾ,
ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ಸಂಗದಿಂದ.