ಸೂರ್ಯಪ್ರಕಾಶ ಆಕಾಶದ ವಿಸ್ತೀರ್ಣ,

Category: ವಚನಗಳು

Author: ಅಕ್ಕಮಹಾದೇವಿ

ಸೂರ್ಯಪ್ರಕಾಶ ಆಕಾಶದ ವಿಸ್ತೀರ್ಣ,
ವಾಯುವಿನ ಚಲನೆಯೆಲ್ಲಾ ಹಗಲಿನ ಪೂಜೆ.
ಚಂದ್ರಪ್ರಕಾಶ ನಕ್ಷತ್ರ ಅಗ್ನಿವಿದ್ಯುತ್ತಾದಿ
ದೀಪ್ತಿಮಯವೆನಿಸಿಪ್ಪವೆಲ್ಲಾ ಇರುಳಿನ ಪೂಜೆ.
ನಿನ್ನ ಪ್ರಕಾಶದಲ್ಲಿ ಎನ್ನ ಮರದಿಪ್ಪೆನಯ್ಯಾ ಚೆನ್ನಮಲ್ಲಿಕಾರ್ಜುನಾ.