ಯಾವ ಫಲ ಬೇಕು ಎನಗೆ
Category: ಶ್ರೀಹನುಮಂತ
Author: ವಚನವೇದ
ಯಾವ ಫಲ ಬೇಕು ಎನಗೆ
ಜನ್ಮ ಸಫಲವ ಗೈವ
ಫಲವಿರಲು ಸುಮ್ಮಗೆ ||
ಮೋಕ್ಷಫಲಗಳ ಬಿಡುವ
ಶ್ರೀರಾಮತರುವಿಹುದು
ನನ್ನ ಎದೆಯೊಳಗೆ ||
ಶ್ರೀರಾಮಕಲ್ಪತರು-
ಮೂಲದಲಿ ನಾ ಕುಳಿತು
ಬೇಕಾದ ಫಲಗಳನು
ಪಡಯುತಿರುವೆ ||
ಪ್ರತಿಫಲವ ನಾ ಬಯಸೆ
ಜಗದ ಕಹಿ ಫಲಗಳನು
ನಿಮ್ಮೊಂದಿಗೇ ಬಿಟ್ಟು
ಮುನ್ನಡೆಯುವೆ ||