ಹಿಂದಣ ಹಳ್ಳ, ಮುಂದಣ ತೊರೆ,

Category: ವಚನಗಳು

Author: ಅಕ್ಕಮಹಾದೇವಿ

ಹಿಂದಣ ಹಳ್ಳ, ಮುಂದಣ ತೊರೆ,
ಸಲ್ಲುವ ಪರಿಯೆಂತು ಹೇಳಾ ?
ಹಿಂದಣ ಕೆರೆ, ಮುಂದಣ ಬಲೆ,
ಹದುಳವಿನ್ನೆಲ್ಲಿಯದು ಹೇಳಾ ?
ನೀನಿಕ್ಕಿದ ಮಾಯೆ ಕೊಲುತಿಪ್ಪುದು ಕಾಯಯ್ಯಾ,
ಕಾಯಯ್ಯಾ ಚೆನ್ನಮಲ್ಲಿಕಾರ್ಜುನಾ.