ಹಿತವಿದೆ ಸಕಲಲೋಕದ ಜನಕ್ಕೆ,
Category: ವಚನಗಳು
Author: ಅಕ್ಕಮಹಾದೇವಿ
ಹಿತವಿದೆ ಸಕಲಲೋಕದ ಜನಕ್ಕೆ,
ಮತವಿದೆ ಶ್ರುತಿಪುರಾಣಾಗಮದ,
ಗತಿಯಿದೆ, ಭಕುತಿಯ ಬೆಳಗಿನುನ್ನತಿಯಿದೆ.
ಶ್ರೀ ವಿಭೂತಿಯ ಧರಿಸಿದಡೆ ಭವವ ಪರಿವುದು
ದುರಿತಸಂಕುಳವನೊರಸುವುದು
ಹರನ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಲ್ಲಿರಿಸುವುದು.
ನಿರುತವಿದು ನಂಬು ಮನುಜಾ,
ಜನನಭೀತಿ ಈ ವಿಭೂತಿ.
ಮರಣಭಯದಿಂದ ಅಗಸ್ತ್ಯ ಕಾಶ್ಯಪ ಜಮದಗ್ನಿಗಳು
ಧರಿಸಿದರಂದು ನೋಡಾ. ಶ್ರೀಶೈಲ ಚೆನ್ನಮಲ್ಲಿಕಾರ್ಜುನನ ಒಲಿವ ವಿಭೂತಿ.