ಅಯ್ಯಾ, ಸಜ್ಜನ ಸದ್ಭಾವರ ಸಂಗದಿಂದ

Category: ವಚನಗಳು

Author: ಬಸವಣ್ಣ

ಅಯ್ಯಾ, ಸಜ್ಜನ ಸದ್ಭಾವರ ಸಂಗದಿಂದ
ಮಹಾನುಭಾವರ ಕಾಣಬಹುದಯ್ಯಾ. ಮಹಾನುಭಾವರ
ಸಂಗದಿಂದ ಶ್ರೀಗುರುವನರಿಯಬಹುದು, ಲಿಂಗವನರಿಯಬಹುದು,
ಜಂಗಮವನರಿಯಬಹುದು, ಪ್ರಸಾದವನರಿಯಬಹುದು, ತನ್ನ
ತಾನರಿಯಬಹುದು. ಇದು ಕಾರಣ ಸದ್ಭಕ್ತರ ಸಂಗವನೆ ಕರುಣಿಸು
ಕೂಡಲಸಂಗಮದೇವಾ, ನಿಮ್ಮ ಧರ್ಮ.