ರಾಮಕೃಷ್ಣ ಗುರುವೇ

Category: ಶ್ರೀರಾಮಕೃಷ್ಣ

Author: ಮೈಸೂರು ದೇವೇಂದ್ರಪ್ಪ

ರಾಮಕೃಷ್ಣ ಗುರುವೇ ಪರಮಹಂಸ ಗುರುವೇ |
ಕಾಮಿತದಾಯಕ ಪ್ರೇಮದಿ ನಮಿಪೆವು ||

ಸಕಲ ಮತವ ನೀನೇಕವೆಂದೆಣಿಸಿದೆ
ಅಕಲಂಕಮಹಿಮ ಮಮ ದೇವ |
ಲೋಕಸೇವೆಯಿಂ ಖ್ಯಾತಿಯ ಹೊಂದಿದೆ
ಮುಕ್ಕಣ್ಣನ ಪ್ರಿಯ ನಮಿಪೆವು ದೇವ ||

ಸ್ವಾಮಿ ವಿವೇಕಾನಂದನ ಗುರುವೇ
ಪ್ರೇಮದಿ ಸಲಹೈ ಸಕಲ ಲೋಕವ |
ತಾಮಸ ಮಾಡದೆ ಕಾವುದು ಎಮ್ಮನು
ಚಾಮುಂಡಾಂಬೆಯ ವರಭಕ್ತನೆ ||