ಅರಿವಿಂದಲರಿವೆನೆಂದಡೆ ಅರಿವಿಂಗಸಾಧ್ಯ,
Category: ವಚನಗಳು
Author: ಬಸವಣ್ಣ
ಅರಿವಿಂದಲರಿವೆನೆಂದಡೆ ಅರಿವಿಂಗಸಾಧ್ಯ,
ಅರಿಯದೆ ಅರಿದ ಪರಿ ಎಂತಯ್ಯಾ ಭಾವಿಸಿ ಬೆರೆಸುವೆನೆಂದಡೆ
ಭಾವ ನಿರ್ಭಾವವೆಂದುದಾಗಿ ಮತ್ತೆ ಭಾವಿಸಿಯಲ್ಲದೆ ಕಾಣಬಾರದಯ್ಯಾ.
ವಾಙ್ಮನಕ್ಕಗೋಚರವೆಂದಡೆ ನುಡಿಯಲಿಲ್ಲದೆ ನಡೆ ಸಾಧ್ಯವಹ ಪರಿ ಎಂತು
ಹೇಳಯ್ಯಾ ಹಲವು ಮಾತಿನ ನಿಲವು ಒಂದೆಂಬ ನುಡಿಗಡಣದ ನಿಜವ
ಬಲ್ಲವರಾರು ಹೇಳಯ್ಯಾ ನಿಮ್ಮ ಮಾತೆಂಬ ಪರತತ್ವವೊಂದಲ್ಲದೆ ಎರಡುಂಟೆ
ಕೂಡಲಸಂಗಮದೇವ ಕಡೆಮುಟ್ಟ ನೋಡುವಡೆ ನುಡಿಗೆಡೆಯಿಲ್ಲ,
ಕೃಪೆಯಿಂದ ಕರುಣವ ಮಾಡಯ್ಯಾ ಪ್ರಭುವೆ.