ರಾಮಕೃಷ್ಣ ತಪೋಸೂರ್ಯ

Category: ಶ್ರೀಶಾರದಾದೇವಿ

Author: ಜಿ.ಎಸ್. ಶಿವರುದ್ರಪ್ಪ

ರಾಮಕೃಷ್ಣ ತಪೋಸೂರ್ಯ
ಕಿರಣಬಿಂಬ ಚಂದ್ರಿಕೆ
ಓ ತಾಯಿ ಅಂಬಿಕೆ ||

ಗಿರಿಯ ದರಿಯ ನೆಲವ ಜಲವ
ತಬ್ಬಿ ನಿಂತ ಕರುಣೆಯೆ
ವಾತ್ಸಲ್ಯವರಣೆಯೆ ||

ರಾಮಕೃಷ್ಣ ತಪೋವನದ
ಪರ್ಣಕುಟಿಯ ದೀಪವೆ |
ಬಳಿಗೆ ಬಂದ ಹಣತೆಗಳಿಗೆ
ಬೆಳಕನಿತ್ತ ಕಿರಣವೆ
ಮೌನಪ್ರಭಾವಲಯವೆ ||

ಸಂಕಟಗಳ ವನವಸನವ-
ನುಟ್ಟು ನಿಂತ ಶಿಖರವೆ |
ನದನದಿಗಳ ವಾತ್ಸಲ್ಯದ
ಹಾಲೂಡಿದ ತೀರ್ಥವೆ
ದಿವ್ಯ ಕೃಪಾರೂಪವೆ ||