ರಾಮಕೃಷ್ಣಾನಂದ ಸ್ವಾಮಿಯೆ

Category: ಇತರೆ

Author: ಸ್ವಾಮಿ ಹರ್ಷಾನಂದ

ರಾಮಕೃಷ್ಣಾನಂದ ಸ್ವಾಮಿಯೆ
ನಮ್ಮ ನಮನವು ನಿನಗೆ ಯತಿಯೆ ||

ವೇದಶಾಸ್ತ್ರದ ಜ್ಞಾನನಿಧಿಯೆ
ಭೇದದರ್ಶನ ರಹಿತ ಸಂತನೆ
ವಾದದೂರನೆ ಶಾಂತಿಪ್ರಿಯನೆ
ನಮ್ಮನಮನವು ನಿನಗೆ ಯತಿಯೆ ||

ಹರಿಯ ಪಾದದಿ ಪರಮಭಕುತಿಯು
ಗುರುವಿನಡಿಯಲಿ ಅದಕು ಮಿಗಿಲು
ಹರಸುತೆಮ್ಮನು ಶಮನಗೊಳಿಸು
ನಮ್ಮ ನಮನವು ನಿನಗೆ ಯತಿಯೆ ||

ತ್ಯಾಗಯೋಗದ ಯುಗಳಮೂರ್ತಿಯೆ
ಭಾಗ್ಯವೆಮ್ಮದು ನಿನ್ನ ಕರುಣೆಯೆ
ಹೋಗಲಾಡಿಸು ಭವದ ಬವಣೆ
ನಮ್ಮ ನಮನವು ನಿನಗೆ ಯತಿಯೆ ||