ರಾಮಕೃಷ್ಣ ಪದಾಂಬುಜದಿ
Category: ಶ್ರೀರಾಮಕೃಷ್ಣ
ರಾಮಕೃಷ್ಣ ಪದಾಂಬುಜದಿ
ನಲಿಯೋ ಎನ್ನ ಮನದ ಭ್ರಮರ |
ಮುಳ್ಳಿನಿಂ ಮುಸುಕಿದೆ ವಿಷಯಕೇದಗೆ
ನಿಲ್ಲದಿರಲ್ಲಿ ನೀ ಮೈಯನು ಮರೆತು ||
ಜನುಮ ಮರಣ ವಿಷಮ ವ್ಯಾಧಿಯ
ಎನಿತು ಕಾಲ ಸಹಿಪೆ ಇನ್ನು|
ಪ್ರೇಮಸುಧೆಯ ಸವಿ ಶ್ರೀಪದದಿ
ಭವದ ಯಾತನೆ ಉಳಿಯದಿನ್ನು ||
ಧರ್ಮಾಧರ್ಮ - ಸುಖ - ದುಃಖ - ಶಾಂತಿ - ತಾಪ
ದ್ವಂದ್ವದಲ್ಲಿರಲು ಮುಕ್ತಿಯದೆಲ್ಲಿ |
ಜ್ಞಾನಖಡ್ಗದಿ ಪರಮ ಯತ್ನದಿ
ಕತ್ತರಿಸು ನೀ ಕರ್ಮದ ಪಾಶವ ||
ರಾಮಕೃಷ್ಣನಾಮ ನಾಲಿಗೆ ನುಡಿಯಲಿ
ಮೋಹದ ಕತ್ತಲು ಕಳೆವುದಾಗ |
ದುಃಸ್ವಪ್ನ ಜ್ವಾಲೆ ಆರುವುದಾಗ
ಮತ್ತಿನ ನಿದ್ರೆಯು ಉಳಿಯದಿನ್ನು ||