ಸಂಜೆಯಾಗಲು ತವಕಿಪುದು
Category: ಶ್ರೀರಾಮಕೃಷ್ಣ
Author: ಕುವೆಂಪು
ಸಂಜೆಯಾಗಲು ತವಕಿಪುದು ಮನ ದಕ್ಷಿಣೇಶ್ವರ ಯಾತ್ರೆಗೆ |
ಪರಮಹಂಸರ ತೀರ್ಥವಾಣಿಯ ಪಂಚ ಅಮೃತದ ಪಾತ್ರೆಗೆ ||
ಗುಪ್ತದಫ್ತರ ಬರೆಯುತಿರ್ಪ ಮಹೇಂದ್ರಗುಪ್ತನ ನೋಡುವೆ |
ಪ್ರಶ್ನವರ್ಷವ ಕರೆಯುತಿರ್ಪ ನರೇಂದ್ರ ವಾದವನಾಲಿಪೆ ||
ಅತ್ತ ಕೇಶವಚಂದ್ರಸೇನನ ಭಕ್ತಿನಮನವ ಕಾಣುವೆ |
ಇತ್ತ ಮತ್ತ ಗಿರೀಶಘೋಷನ ಚಂದ್ರ ಚಿತ್ತದಿ ತೊಯ್ಯುವೆ ||
-ಕುವೆಂಪು