ನಿಖಿಲ ಮಾತೃಹೃದಯ

Category: ಶ್ರೀಶಾರದಾದೇವಿ

ನಿಖಿಲ ಮಾತೃಹೃದಯ ಮಥಿಸಿ
ಪ್ರೇಮದಮೃತ ಧರೆಗೆ ತಂದೆ
ಯಾರು ನೀನು ನಿತ್ಯ ನಿರ್ಮಲ
ಶುದ್ಧ ಜ್ಯೋತಿ ಬಂದಿಹೇ ||

ಅನ್ನದಾಯಿನಿ ಅನ್ನಪೂರ್ಣೇ
ಮಾತೃಮೂರ್ತಿ ಪ್ರೀತಿ ತುಂಬಿ
ನೊಂದ ಜನಕೆ ನೆರವ ನೀಡೆ
ಇಳೆಗೆ ಇಳಿದು ಇಳಿದು ಇಳಿದು
ಇಳಿದು ಬಂದೆ ||

ಹೇ ಶಾರದೇ ವರದೇ ಶುಭದೇ
ಜ್ಞಾನದೇ ಭಕ್ತಿದೇ ಭುಕ್ತಿದೇ ಮುಕ್ತಿದೇ
ನಿನ್ನ ಕೃಪಾಬಲದಿ ಬೇಗ
ಸಫಲವಾಗಲೆಮ್ಮ ಯೋಗ ||